Thursday, January 20, 2011

ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗುತ್ತದೆ ಎಂಬ ಕಾರಣವನ್ನು ಹೊತ್ತು ಪತ್ರಿಕೆಗಳು ಆರಂಭಗೊಂಡವು. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನುವ ಹೆಗ್ಗಳಿಕೆಯ ಅಡಿಬರಹ ಈ ಪತ್ರಿಕೆಗಳಿಗೆ. ನಡೆದ ಸುದ್ದಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಘನೋದ್ದೇಶ ಪತ್ರಿಕೆಗಳಿದ್ದು. ಆದರೆ ಇಂದೇನಾಗುತ್ತಿದೆ. ಸರ್ಕಾರದ ಜತೆ ಶಾಮೀಲಾಗಿ ಇನ್ನೊಂದು ತಿನ್ನುಬಾಕ ಸಂಸ್ಕೃತಿಗೆ ನಾಂದಿಯಾಗಿದೆ. ಪತ್ರಿಕೆಗಳು ತಮ್ಮ ಕಾಗದ ಮುದ್ರಣದಿಂದ ಪರಿಸರಕ್ಕೆ ಹಾನಿ ಮಾಡುವುದರ ಜತೆ ಒಳ ವ್ಯವಹಾರದ ಮೂಲಕ ಸಮಾಜ್ದ ಶೋಷಣೆಗೆ ಇಳಿದಿವೆ. ಕನ್ನಡದಲ್ಲಿ ಶುರುವಾದ ಟ್ಯಾಬ್ಲಾಯ್ಡ್ ಪತ್ರಿಕೆಗಳು ಹಾಗೂ ಪತ್ರಕರ್ತರು ತಮ್ಮ ಸ್ವಂತ ಆಸ್ತಿ ಬೆಳೆಸಲು ರಾಜಕೀಯನಾಯಕರು ತುಳಿಯದ ದಾರಿಯನ್ನು ಹುಡುಕಿ ಬೆಳೆಸಿಕೊಳ್ಳುತ್ತಿದ್ದಾರೆ. ಲಂಕೇಶ್ ಎಂಬ ಸಾಯ್ತಿ....! ಯಿಂದ ಪ್ರಾರಂಭವಾದ ಈ ಸತ್ತಸಂಪ್ರದಾಯ..! ಹಣ ಮಾಡುವ ದಂಧೆಯಾಗಿ ಪರಿಣಮಿಸಿದೆ. ಸಮಾಜಮುಖೀ ಸೋಗನ್ನು ಹೊತ್ತ ಮಾಜಿ ರೌಡಿ ಶ್ರೀಧರ್ ಕೂಡ ತನ್ನ ಅಗ್ನಿ ಎಂಬ ಪತ್ರಿಕೆಯ ಮೂಲಕ ಪತ್ರಕರ್ತ ಈಗ. ಪ್ರಪಂಚಕ್ಕೆ ಬುದ್ಧಿ ಹೇಳುವ ಆಸಾಮಿ...!. ಇನ್ನು ಗೌರಿ ಲಂಕೇಶ್,ರವಿಬೆಳೆಗೆರೆ, ಉದಯ ಮಾಸಡಿ...ಹೀಗೆ ಸಾಲು ಸಾಲು ಸಮಾಜ ಶೋಷಕರ ಪಡೆಯೇ ಹುಟ್ಟಿಕೊಂಡಿದೆ. ಇವರುಗಳಿಂದ ಇವರು ಹೊರಡಿಸುವ ಪತ್ರಿಕೆಗಳಿಂದ ಕಾಸಿನ ಪ್ರಯೋಜನ ಏನಾದರೂ ಇದೆಯೇ? ಎಂಬ ಪ್ರಶ್ನೆ ಎಲ್ಲರಿಗೂ ಕಾಡದಿರದು.
ಕಾಲಾಯ ತಸ್ಮೈ ನಮಃ ಅನ್ನಬೇಕಾ...? ಗೊತ್ತಿಲ್ಲ.

No comments: